ಗೋಪಿಗೆ ಮಾಡಲು ಹೊರೆಟರು ಮದುವೆ
ಸಿಗಲೇ ಇಲ್ಲ ವಧುವೇ
ನೋಡಲು ಹೋದ ಹುಡುಗಿಯರ ಅಪ್ಪನ್ದಿರೆಲ್ಲ ಕೇಳುವುದು ಇದೇ
"ಹುಡುಗ ಇರುವುದು ಸಾಫ್ಟ್ ವೇರೇ?"
"ಇಲ್ಲ" ಎಂದಾಗ ಫ್ಲಾಪ್ ಆಗುವುದು ಗೋಪಿಯ ಕತೆ
ಪಾಪ ಗೋಪಿ, ಯಾಕಪ್ಪ ನಿನಗೀ ವ್ಯಥೆ
"ಹಾಳಾದ ಸಾಫ್ಟ್ ವೇರ್! ನಿನ್ನಿಂದ ನಾನು ಸತ್ತೆ"
ಎಂದು ಅಳುವನು ಗೋಪಿ ಮತ್ತೆ ಮತ್ತೆ
ಪೀ.ಎಸ್: ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಹುಡಗರಿಗೆ ಮಾತ್ರ ಹುಡುಗಿಯರನ್ನ ಕೊಡೋದು ಹುಷಾರ್!
ಕನ್ನಡವೆ ನನ್ನ ಪ್ರೀತಿಯ ಭಾಷೆ ಎಂದು ಎಲ್ಲರಿಗೂ ಪ್ರಚಾರ ಮಾಡಿಕೊಂಡು ಬರ್ತೀನಿ ಆದರೆ ಅದರ ಬಗ್ಗೆ ಏನು ಮಾಡುವುದಿಲ್ಲ. ಇವತ್ತಿನಿಂದ ನಾನು ಕನ್ನಡದಲ್ಲಿ ಬರೆಯುವೆ ಎಂದು ಶಪಥ ಮಾಡುವೆ. ಎಷ್ಟ್ ದಿನ ನಡೆಯತ್ತೆ ಅಂತ ನೋಡೋಣ